Saturday 2 March 2024

೦೨-೦೩-೨೦೨೪ ಶನಿವಾರ ಸಂಜೆ ಸಮುದಾಯ ಮಂಗಳೂರು ಹಾಗೂ ಸಂತ ಅಲೋಶಿಯಸ್‌ ಕಾಲೇಜಿನ ಸಹೋದಯ ಸಭಾಂಗಣದಲ್ಲಿ , ಸಮುದಾಯ ಬೆಂಗಳೂರು ತಂಡ ಅಭಿನಯಿಸಿದ ನಾಟಕ "ಕರಿಯ ದೇವರ ಹುಡುಕಿ" ಸುಂದರವಾಗಿ ಮೂಡಿ ಬಂತು. ಮೂಲ ಪ್ರೊ. ಜಿ ಶಂಕರ ಪಿಳ್ಳೈ ರಚಿಸಿದ ಈ ನಾಟಕವನ್ನು ಡಾ. ನಾ ದಾಮೋದರ ಶೆಟ್ಟಿ ಕನ್ನಡ ಬಾಷೆಗೆ ಅನುವಾದಿಸಿದ್ದಾರೆ. ನಿರಂಜನ ಖಾಲಿಕೊಡ ನಿರ್ದೇಶಿಸಿದ ಈ ನಾಟಕ ತನ್ನ ಕಥೆಯ ಗಟ್ಟಿತನದಿಂದಾಗಿ ಮನಸ್ಸಿನಲ್ಲಿ ಉಳಿಯುವಂತಾಯಿತು. ಮಾನವನ ಹುಟ್ಟು, ನಾಗರೀಕತೆಯ ಬೆಳವಣಿಗೆ, ವಲಸೆ, ನಂಬಿಕೆ, ಹುಡುಕಾಟ, ತನ್ನದೇ ಮೇಲು ಎಂಬ ದರ್ಪ, ಆಚಾರ ವಿಚಾರಗಳ ಹುಟ್ಟು, ನಂಬಿಕೆಗಳಿಗಾಗಿ ಮೂಕ ಪ್ರಾಣಿಗಳ ಬಲಿ, ಕೊನೆಗೆ ಬಲಿಯಾದ ಪ್ರಾಣಿಯೇ ದೇವರಾಗುವ ಪರಿ ಬಹಳ ಸೊಗಸಾಗಿತ್ತು. ಒಂದು ಸಂಸ್ಕೃತಿ ಇನ್ನೊಂದರೊಂದಿಗೆ ಸೇರಿ ಹುಟ್ಟುವ ಹೊಸ ಆಚಾರ, ವಿಚಾರ, ನಂಬಿಕೆಗಳು, ನಾವು ಇಂದು ಎಲ್ಲಿಗೆ ಬಂದು ನಿಂತಿದ್ದೇವೆ ನಮ್ಮ ನಂಬಿಕೆ ಮತ್ತು ಆಚರಣೆಗಳ ಮೂಲ ಎಲ್ಲಿ ಎಂಬುದನ್ನು ಮತ್ತೆ ಪ್ರಶ್ನಿಸಿಕೊಳ್ಳುವಂತೆ ಮಾಡಿತು. ವೃತ್ತಾಕಾರದ ಹಲವು ವೃತ್ತಗಳನ್ನು ಬೇರೆಬೇರೆ ರೀತಿಯಾಗಿ ನಾಟಕದ ಕಥೆಗೆ ಪೂರಕವಾಗಿ ಬಳಸಿಕೊಂಡ ರೀತಿ ಬಹಳ ಸೊಗಸಾಗಿತ್ತು. ಹಲವಾರು ಕಡೆ ಅವುಗಳೇ ಕಥೆ ಹೇಳುವಂತಿತ್ತು, ಯುವ ನಟರನ್ನು ಇನ್ನೊಂದಿಷ್ಟು ಉತ್ತಮವಾಗಿ ದುಡಿಸಿಕೊಂಡಿದ್ದರೆ ನಾಟಕದ ಆಶಯ ಇನ್ನೂ ಗಟ್ಟಿಯಾಗಿ ಮೂಡಿಬರುತ್ತಿತ್ತು. ಕಥೆಯ ಗಟ್ಟಿತನದಿಂದಾಗಿ ನಾಟಕ ಮತ್ತೆ ಮೆಲುಕುಹಾಕುವಂತಿತ್ತು.. 

ಪ್ರದರ್ಶನ ಏರ್ಪಡಿಸಿದ ಎಲ್ಲರಿಗೂ ಧನ್ಯವಾದಗಳು


















No comments:

Post a Comment