ಧಾತ್ರಿ ರಂಗಸಂಸ್ಥೆ(ರಿ) ಸಿರಿಗೇರಿ,
ಸಿರಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ ಅಭಿನಯಿಸಿದ
ಸಾವಿತ್ರಿ ಬಾಯಿ ಪುಲೆ ಬದುಕಿನ ಕಥೆ ಆಧರಿಸಿದ ನಾಟಕ
ಸರಸತಿಯಾಗಲೊಲ್ಲೆ
ರಚನೆ- ಡಾ.ಎಂ ಭೈರೇಗೌಡ
ನಿರ್ದೇಶನ- ನವೀನ್ ಭೂಮಿ
ದಿನಾಂಕ 12-12-2024 ರಂದು
ಬಿ ವಿ ಕಾರಂತ ರಂಗಭೂಮಿಕಾ ಟ್ರಸ್ಟ್, ಮಂಚಿ
ಇವರ ಆಯೋಜನೆಯಲ್ಲಿ
ಕುಕ್ಕಾಜೆಯ ಸಿದ್ಧಿವಿನಾಯಕ ಭಜನಾ ಮಂದಿರದ ಆವರಣದಲ್ಲಿ
ಈ ನಾಟಕ ಪ್ರದರ್ಶನಗೊಂಡಿತು.
ಚಂದದ ನಿರೂಪಣೆ, ಸರಳವಾದ ರಂಗಸಜ್ಜಿಕೆ ಯೊಂದಿಕೆ, ಸಾವಿತ್ರಿ ಬಾಯಿ ಪುಲೆ ಮತ್ತು ಜ್ಯೋತಿ ಬಾ ಪುಲೆ ಬದುಕಿನ ಚಿತ್ರಣವನ್ನು ಸುಂದರವಾಗಿ ನಾಟಕ ಕಟ್ಟಿಕೊಟ್ಟಿತು. ಕೇವಲ ಎಂಟು ಮಂದಿ ನಟರು ರಂಗದ ಮೇಲೆ ನೂರಾರು ಪಾತ್ರಗಳನ್ನು ತಂದು ಸಾವಿತ್ರಿ ಬಾಯಿ ಬದುಕನ್ನು ನಮಗೆ ಕಟ್ಟಿಕೊಡುತ್ತಾರೆ.
ಸುಮಾರು 90 ನಿಮಿಷಗಳ ಈ ನಾಟಕ ಸರಳ ಸುಂದರ ನಿರೂಪಣೆಯೊಂದಿಗೆ ಇಷ್ಟವಾಯಿತು
ನಾಟಕದ ಕೆಲವು ದೃಶ್ಯಗಳು ನಿಮಗಾಗಿ